Sunday, June 8, 2014

ಕೊಡಗು ಪ್ರವಾಸ

ಬೆಂಗಳೂರು ನಗರದಲ್ಲಿ ದಿನದಿನಕ್ಕೂ ಹೆಚ್ಚುತ್ತಿರುವ ಜನಸಂಖ್ಯೆ, ಅವರ ವಿಭಿನ್ನ ಧೋರಣೆ, ಆಚಾರ, ವಿಚಾರ, ದಿನಚರಿ, ಆಸೆ- ಆಕಾಂಕ್ಷೆ, ಸಡಗರ, ಸಂಭ್ರಮ, ವರ್ತನೆ....
ಎಲ್ಲರಿಗೂ ತಮ್ಮ ತಮ್ಮ ಊರು, ಭಾಷೆ, ಸಂಸ್ಕೃತಿ, ಪರಿಸರದ ಬಗ್ಗೆ ಅತೀವ ಅಭಿಮಾನ . ಅದು ಸಹಜ. ಬೆಂಗಳೂರಿನಲ್ಲೇ ಹುಟ್ಟಿ, ಬೆಳದು, ಬದುಕನ್ನು ಕಂಡುಕೊಂಡೆ. ಯಾರಾದರೂ ಅದರ ಬಗ್ಗೆ ಅನಾದರದಿಂದ ಮಾತನಾಡಿದರೆ ಬಹಳ ಬೇಸರವಾಗುತ್ತದೆ. ಇಲ್ಲಿ ಬದುಕನ್ನು ಕಂಡುಕೊಳ್ಳುತ್ತಿರುವ ಹೆಚ್ಚುವರಿ ಜನರೆಲ್ಲಾ ಪರ ಊರಿನವರೇ ಆದ ಕಾರಣ ಅವರಿಗೆಲ್ಲ ಬೆಂಗಳೂರಿನೆಡೆಗೆ ಆಕರ್ಷಣೆಯೇನೋ ಇದೆ. ಇಲ್ಲೇ ನೆಲೆ ಕಂಡುಕೊಳ್ಳಬೇಕೆಂಬ ಹೆಬ್ಬಯಕೆಯೂ ಇದೆ.
ಜೊತೆಗೆ ಮುಗಿಯದ complaints.
ಮೆಚ್ಚುಗೆಯೇನಿದ್ದರೂ ತಮ್ಮೆಡೆಗೆ ಮಾತ್ರ. ಇರಲಿ ಆದರೆ ಅದಕ್ಕೆ ಬೆಂಗಳೂರೆ ಬೇಸರ ಮಾಡಿಕೊಂಡಿಲ್ಲವೆಂಬುದೇ ದೊಡ್ಡ ಸಮಾಧಾನ.
ಯಾಕೆಂದರೆ ಯಾರು ಏನೇ ಹೇಳಿದರೂ ತನ್ನ ಸಾಮರ್ಥ್ಯ ಅದಕ್ಕೆ ಗೊತ್ತಿದೆ. ಅದಕ್ಕೇ ಅದು ಹೆಚ್ಚು ಪ್ರತಿಕ್ರಿಯಿಸದೇ ತನ್ನ ಪಾಡಿಗೆ ತನ್ನ ಬೆಳವಣಿಗೆಯೆಡೆಗೆ ಮುಖ ಮಾಡಿ ನಿಂತಿದೆಯೇನೋ ಎನ್ನುವುದು ಭಾವನೆ.
Famous ‘ಮಡಿಕೇರಿ ಮೇಲ್ ಮಂಜು’ ಹಾಡಿನ ಕಲ್ಪನೆಯೊಂದಿಗೆ ಮಡಿಕೇರಿಗೆ ಕಾಲಿಟ್ಟವಳಿಗೆ ಸ್ವಾಗತಿಸಿದ್ದು ರಣರಣ ಬಿಸಿಲು. ಇದೇನಪ್ಪಾ ಬೆಂಗಳೂರಿನಿಂದ ಈ ಬಿಸಿಲನ್ನು ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದರೆ ಇಲ್ಲಿಯೂ ನಮ್ಮ ಪಾಲಿಗೆ ಇದೇ ಉಳಿಯಿತಲ್ಲಿಗೆ ತಣ್ಣಗೆ ಅಪ್ಪಿ ಮುದ್ದಾಡಿ ಸಂತೈಸಿದ್ದು ಕಾವೇರಿಯ ಜನ್ಮದಾತೆ ಭಾಗಮಂಡಲ.
ಜಿಮ್, ಏರೋಬಿಕ್ಸ್, ಯೋಗ, ಡಾನ್ಸ್.... ಅಂತೆಲ್ಲ physical exersise ಗೆ ಪ್ರಾಮುಖ್ಯತೆ ಕೊಡುವ ನಮ್ಮ ಏಕತಾನತೆಯ city lifeಗೂ ಪ್ರಕೃತಿಯ ಮಡಿಲಲ್ಲಿ ಸಹಜವಾದ ಚಟುವಟಿಕೆಗಳಿಂದ ಕೂಡಿರುವ ಆರೋಗ್ಯಯುತ life styleಗೂ ಹೋಲಿಕೆ ಮಾಡುತ್ತಾ ಎಂಟುನೂರು ಮೆಟ್ಟಿಲು ಹತ್ತಿಳಿದಿದ್ದು ಅರಿವಿಗೇ ಬರಲಿಲ್ಲ. ಆದರೂ ಕೊಂಚ ಆಯಾಸವೇ ಕಾಣಲಿಲ್ಲ ..
.ದೊಡ್ಡ ಕಾಫಿ ಎಸ್ಟೇಟಿನ ಪುಟ್ಟಪುಟ್ಟ ಕಾಟೇಜ್ ಗಳಲ್ಲಿ ಲಗೇಜ್ ಬಿಸಾಕಿ ಸುಮ್ಮನೆ ಒಂದಷ್ಟು ದೂರ ಹೆಜ್ಜೆ ಹಾಕುತ್ತಿದ್ದರೆ ಮನಸಿನಲ್ಲಿ ಎಂಥದೋ ಉಲ್ಲಾಸ< br>. No phone, no internet.... ಹೀಗಾಗಿ ನನ್ನೊಂದಿಗೆ ಕೇವಲ ನಾನು ಮಾತ್ರ. ಕಾಡಿನೆಡೆಗೆ ಮುಖಮಾಡಿ ಬೆಳಕಲ್ಲಿ ಕಣ್ಣು ತೆರೆದಷ್ಟೂ ತುಂಬಿಕೊಂಡಿದ್ದು ಕೇವಲ ದಟ್ಟ ಹಸಿರು!
ಜೊತೆಗೆ ನಿಚ್ಚಳ ನೀಲ ಆಕಾಶ! ನಂತರ ಆವರಿಸಿಕೊಂಡದ್ದು ಗಾಢ ಕತ್ತಲು! ಕಾಡಿನ ಆ ಗಾಢ ಮೌನ. . .

ಕನಸುಗಳು ನನಸಾಗುವ ಹಾಗೆ ಅದ್ಭುತ ಅನುಭವ.ಕೊಡಗು ಪ್ರವಾಸ ಬಹಳ ಅದ್ಭುತ...

No comments:

Post a Comment