ಮಳೆಗಾಗಿ ಕಾದು ಕೆಂಪಾದ ಧರೆಯ ತೆರದಿ,
ನಾ ನಿನ್ನಾಗಮನಕ್ಕೆ ಕಾದಿಹೆ...
ಬಂದು ಹೋಗು ಒಮ್ಮೆ ಆ ಪ್ರೀತಿ ಮಳೆ ಹಾಗೇ ಸುರಿಯಲಿ ಸುಮ್ಮನೇ ..
ಅವನ ಕಣ್ಣುಗಳಲ್ಲಿ ಎಂದಿನಂತೆ ಭಯ ಇರಲಿಲ್ಲ.
ನಾನು ಅವನಿಗೆ ನನ್ನ ಪ್ರೀತಿಯ ವಿಷಯ ಹೇಳಿದ ದಿನದಿಂದ ಅವನಲ್ಲಿ ನಾನು ಸಾಕಷ್ಟು ಬದಲಾವಣೆ ನೋಡಿದ್ದೆ. ಇಂದು ಅವನು ಬಂದಾಗ ಅವನು ನನ್ನ ಜೊತೆ ಕಂಫರ್ಟೆಬಲ್ ಆಗಿದ್ದ.
ಬೆಂಗಳೂರಿನ ಹವೆಗೆ ಒಗ್ಗಿಹೋದ ನಾನು ಆರಾಮಾಗಿ ಕೂತಿದ್ದರೆ, ಅವನು ಸೆಕೆಯಿಂದ ಬೆವೆತುಹೋಗಿದ್ದ..
ಅದೇ ಗೆಳೆಯ,ಅದೇ ತರಲೆಗಳು ಆದರೆ ಬಹಳಷ್ಟು ವಿಷಯಗಳು ಬದಲಾವಣೆ ಕಂಡಿದ್ದವು.
ಜ್ಯೂಸ್ ಕುಡಿಯುತ್ತಾ ಮಾತು ಶುರುವಾಯಿತು.ಪ್ರಯಾಣದ ಬಗ್ಗೆ, ಅಮ್ಮ ನ ಬಗ್ಗೆ, ಹಳೇ ದೋಸ್ತ್ ಬಗ್ಗೆ ಹಾಗೇ ಮಾತು ಮುಂದುವರಿಯುತ್ತಾ ಕತ್ತಲೆ ಬಾನಲ್ಲಿ ಆವರಿಸತೊಡಗಿತು..
ನನ್ನ ಬಾಳಿನ ಕತ್ತಲು ಕಳೆಯತೊಡಗಿತು.. ಜೀವನ ಅವನ ರೂಪ ಧರಿಸಿ ಬಂದು ಬದುಕುವ ಹೊಸ ಚೈತನ್ಯ ನನ್ನಲ್ಲಿ ಮೂಡಿಸಿತ್ತು.
No comments:
Post a Comment