ಕನಸುಗಳು ಸಾಕಾರಗೊಳ್ಳಲು ಶ್ರದ್ಧೆ, ಸಮಾಧಾನ ,ಸಂಯಮ ಹಾಗೂ ಕಾರ್ಯನಿಷ್ಠೆ ಇರಬೇಕು.
Saturday, February 21, 2015
Wednesday, February 18, 2015
ಧೃತಿ- ಬಾಳಿನ ಬೆಳಕು
ಅಲ್ಲಿ ಅವಳ ಅಮ್ಮನ ಫೋಟೋ ಪುಟ್ಟ ಗಾಜಿನ ಫ್ರೇಮಿನೊಳಗೆ ಧೂಳು ಹಿಡಿದು ಕುಳಿತಿತ್ತು. ಅದನ್ನು ಒರೆಸಿಟ್ಟಳು. ಹಾಗೇ ಬೇಸರದಿಂದ ಊಟ ಮಾಡಿ, ಸ್ವಲ್ಪ ಟಿ.ವಿ ನೋಡಿದ ಕೂಡಲೇ ನಿದ್ರೆ ಬರುವಂತಾಯಿತು. ಟಿ.ವಿ ಆರಿಸಿ ತನ್ನ ರೂಮಿಗೆ ಬಂದಳು.ಬೆಳಿಗ್ಗೆ ಅರ್ಧ ತಿಂದುಳಿದ ಬಿಸ್ಕೆಟ್ ನ ಪ್ಯಾಕೆಟ್ ಮಂಚದ ಮೇಲೇ ಇತ್ತು.ಅದನ್ನು ಎತ್ತಿಟ್ಟು ಅಲ್ಮೇರಾದ ಮೇಲೆ ಅಂಟಿಸಿದ್ದ ದೇವರ ಚಿತ್ರಕ್ಕೊಮ್ಮೆ ಕೈಮುಗಿದು ದಿಂಬನ್ನು ಸರಿಸಿ ಮೆತ್ತನೆ ಹಾಸಿಗೆಯಲ್ಲಿ ಮಲಗಿದಳು.ಆಗ ತಾನೇ ಟಿ.ವಿಯಲ್ಲಿ ನೋಡಿದ್ದ ಜಾಹೀರಾತು ನೆನಪಾಯಿತು. ಹುಂಜವು ತನ್ನ ಮಗನಿಗೆ ಬಯ್ಯುತ್ತ
"ಯಾವಾಗಲೂ ಹೇಂಟೆಗಳ ಹಿಂದೇನೇ ಇರ್ತೀಯಾ "ಅಂದದ್ದು .. ಅವಳಿಗೆ ತುಂಬಾ ನಗು. ಯಾವಾಗ ನಿದ್ರೆಗೆ ಜಾರಿದಳೋ ಗೊತ್ತಾಗಲೇ ಇಲ್ಲ. ಅವಳ ಅಕ್ಕ ನಿತ್ಯಾ ಬಂದು ಬಾಗಿಲು ಬಡಿದದ್ದೂ ಆಯ್ತು, ಫೋನ್ ಕೂಡ ಮಾಡಿದ್ದಾಯ್ತು.. ಕೊನೆಗೆ ಸಾಕಾಗಿ ಬೇರೆ ಕೀ ಇಂದ ಬಾಗಿಲು ತೆಗೆದು ಒಳಗೆ ಬಂದಳು. ಸಮನ್ವಿತಾ ನಿದ್ದೆಯಲ್ಲಿ ಕನವರಿಸುತ್ತಾ ಮಲಗಿದ್ದಳು.ಅದನ್ನು ನೋಡಿ ನಿತ್ಯಳಿಗೆ ಆಫೀಸಿನ ಕೆಲಸದ ದಣಿವೆಲ್ಲ ಮಾಯವಾಗಿ ನಗು ಮುಖದ ಮೇಲೆ ಕಾಣಿಸಿತು. ಅವಳು ತಕ್ಷಣ ಫೋನ್ ತೆಗೆದುಕೊಂಡು ಸಮನ್ವಿತಳ ಮಾತನ್ನು ರೆಕಾರ್ಡ್ ಮಾಡಿದಳು, ತಂಗಿ ಎದ್ದಮೇಲೆ ಅವಳಿಗೆ ರೇಗಿಸುವ, ಮುದ್ದಾಗಿ ಕೀಟಲೆ ಮಾಡುವ ಉದ್ದೇಶದಿಂದ. ಅಪ್ಪ, ಅಮ್ಮನನ್ನು ಕಾಣದ ಪುಟ್ಟ ಹುಡುಗಿಯನ್ನು ಚಿಕ್ಕಂದಿನಿಂದ ಅಮ್ಮನಷ್ಟೇ ಜವಾಬ್ದಾರಿಯಿಂದ ನೋಡಿಕೊಂಡ ನಿತ್ಯಳಂತಹ ಅದೆಷ್ಟೋ ಹೆಣ್ಣುಮಕ್ಕಳು ನಮಗೆ ಸ್ಪೂರ್ತಿಯಾಗಿ ,ನಮ್ಮ ಬದುಕಿನೆಡೆಗೆ ಇರುವ ನಿಲುವನ್ನು ಬದಲಾಯಿಸಿ, ಜೀವನಕ್ಕೆ ಹಾಗೂ ಮನುಷ್ಯತ್ವಕ್ಕೆ ನ್ಯಾಯ ಒದಗಿಸುತ್ತಾರೆ.
-ಪ್ರಿಯಾಂಕಾ
Wednesday, January 21, 2015
ಹಿತ
ಓ ಮಂಜಿನ ಹನಿಯೇ, ನೀನೆಷ್ಟು ಸುಂದರ... ನೀನಿರುವೆ ಎಲೆಗಳ ಮೇಲೆ ... ಮುತ್ತುಗಳ ಪೋಣಿಸಿದ ರೀತಿ. ನನ್ನ ಕೊರಳ ಅಲಂಕರಿಸಿದ ಈ ಮುತ್ತಿನ ಹಾರಕ್ಕಿಂತ ನೀನು ಬಳಿ ಇರುವುದೇ ನನಗೆ ಹಿತ...
Monday, January 19, 2015
ಸಂಗಾತಿ
ಮೋಹಕ ಮುಗುಳ್ನಗೆಗೆ ಸೋಲುತಿದೆ ಮನ,
ಬೆಚ್ಚನೆ ಸಿಹಿ ಅಪ್ಪುಗೆಯ ಬಯಸಿದೆ ಮನ,
ಜೊತೆಗಿರಲು ನೀನು,
ಜಗವನ್ನೇ ಮರೆತೆ..
ಬೇರೇನನ್ನೂ ಬಯಸೆನು...
ನೀ ನನ್ನ ಒಡವೆ ...
ನೀ ನಗಲು ಬೃಂದಾವನ ಅರಳಿ ನಿಂತಷ್ಟೇ ಸುಂದರ..
ಕಿರಣಗಳನ್ನು ಧರೆಗೆ ಧಾರೆಯಾಗಿ ಹರಿಸಿದಂತೆ ಭಾಸ್ಕರ..
ನಿನ್ನ ಒಂದು ಹಿತಸ್ಪರ್ಷ ಚಳಿಗಾಲದಲ್ಲಿ ಬಿಸಿ ಕಾವು ಸಿಕ್ಕ ಹಾಗೆ...
ಎದೆಯಲ್ಲಿ ಕಚಗುಳಿ, ನೀನಿರಲು ನನ್ನೊಂದಿಗೆ ...

ಚಡಪಡಿಕೆ
ಸಾರಿಕಾ ನಮ್ಮ ಪಕ್ಕದ ಮನೆ ಹುಡುಗಿ.
ತುಂಬಾ ಲವಲವಿಕೆಯಿಂದ ಇದ್ದ ಇವಳು ಇಂದೇಕೋ ಕಾಲೇಜಿಗೂ ಹೋಗದೆ ಮನೆಯಲ್ಲಿ ಯಾರ ಬಳಿಯೂ ಮಾತಾಡದೆ ಸಪ್ಪಗೆ ಕೂತಿದ್ದು ಅವರಮ್ಮ, ನನ್ನ ಅಮ್ಮ ಹಾಗೂ ನಮ್ಮ ವಠಾರದ ಎಲ್ಲರಿಗೂ ಆಶ್ಚರ್ಯವಾಗಿತ್ತು. .
ಸದಾ ಪಟಪಟನೆ ಮಾತಾಡಿ, .
ಚಿಟ್ಟೆಯಂತಿದ್ದ ಅವಳು ಮೌನ ತಾಳಿದ್ದು ಅಸಹಜ ಅನಿಸುತ್ತಿತ್ತು. .
ಬೆಳಗ್ಗೆ ತಿಂಡಿಯನ್ನೂ ತಿನ್ನದೇ, ಮಧ್ಯಾಹ್ನ ಊಟ ಕೂಡ ಮಾಡದೆ ಸುಮ್ಮನೆ ರೂಮಲ್ಲಿ ಕೂತಿದ್ದಳು. .
ಗಾಬರಿಯಿಂದ ಅವಳಮ್ಮ, ತನ್ನ ಗಂಡನಿಗೆ ಫೋನ್ ಮಾಡಿ ಬರಲು ಹೇಳಿದ್ದೂ ಆಯ್ತು. ಅವರು ಬರಬೇಕಾದರೆ ಆ ಟ್ರಾಫಿಕ್ ನ ದಾಟಿ ವಸಂತನಗರಕ್ಕೆ ಬರಲು ನಾಲ್ಕು ಗಂಟೆಗಳು ಬೇಕು. ಆಗ ಅವಳಿಗೆ ತುಂಬಾ ಆತ್ಮೀಯರಾದ ಅವಳ ಕಮಲತ್ತೆಯನ್ನು ಕರೆಸಿದರು.ಅತ್ತೆ ಇಲ್ಲೇ ಹತ್ತನೇ ಕ್ರಾಸ್ನಲ್ಲಿ ವಾಸವಾಗಿದ್ದಾರೆ. .
ಆದ್ದರಿಂದ ಬೇಗನೇ ಬರಲು ಸಾಧ್ಯವಾಯ್ತು.
ಅತ್ತೆ ಬಂದವರೆ ರೂಮಿನಲ್ಲಿ ಒಬ್ಬಳೇ ಕೂತಿದ್ದ ಸಾರಿಕಾ ಬಳಿ ಹೋಗಿ ರೂಮ್ ಬಾಗಿಲು ಹಾಕಿಕೊಂಡರು.
ಅಂತೂ ಅರ್ಧ ಗಂಟೆ ಆದ ಮೇಲೆ ಕಮಲ ಅತ್ತೆ ಆಚೆ ಬಂದರು.
"ಏನಿಲ್ಲ ಸುಮಕ್ಕ, ಅವಳ ಮೊಬೈಲು ಹಾಳಾಗಿತ್ತಂತೆ.ರಿಪೇರಿಗೆ ಕೊಟ್ಟು ಬಂದಿದ್ದಾಳೆ .
ಮೊಬೈಲು ಶಾಪ್ ನವನು ಇನ್ನು ಮೂರು ದಿನ ಬಿಟ್ಟು ಬನ್ನಿ ಅಂದಿದ್ದಾನೆ..
ಅಷ್ಟು ದಿನ ಹೇಗಪ್ಪ ಫೇಸ್ ಬುಕ್,ವಾಟ್ಸಾಪ್ ಎಲ್ಲ ಬಿಟ್ಟು ಇರೋದು ಅಂತ ಚಡಪಡಿಸು ತ್ತಾ ಇದ್ದಾಳೆ ಅಷ್ಟೇ "
ಅಂದಾಗ ಅಲ್ಲೇ ಇದ್ದ ನಮಗೆಲ್ಲ ನಗಬೇಕೊ,ಅಳಬೇಕೋ, ತಲೆ ಚಚ್ಚಿಕೊಳ್ಳಬೇಕೋ ಗೊತ್ತಾಗಲಿಲ್ಲ. . .

Thursday, January 15, 2015
ಒಲವಿನ ಈ ಪರಿ ಎಂತು...
ಇಷ್ಟಕ್ಕೂ ಪ್ರೀತಿ ಅಂದ್ರೆ ಏನು?
ಹೀಗೆಯೇ ನಾನು ಯೋಚಿಸುತ್ತಾ ಕುಳಿತಿದ್ದಾಗ ಅರ್ಧ ಕೆಂಪಾದ ಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಜಾರಿಕೊಳ್ಳುತ್ತಿದ್ದ.
ನನ್ನ ಗೆಳತಿ ಕಾವ್ಯ ಆಗ ತಾನೇ ಕೋಚಿಂಗ್ ಕ್ಲಾಸಿನಿಂದ ಬಂದು ಸುಸ್ತಾಗಿ ಮಲಗಿದ್ದಳು.
ಅವಳನ್ನು ಕೇಳಲು ಎದ್ದವಳು ಏಕೋ ಬೇಡವೆಂದು ಹಾಗೇ FM ಆನ್ ಮಾಡಿ ನನಗಿಷ್ಟದ ಕಾರ್ಯಕ್ರಮವನ್ನು ಹಾಕಿ ಬಾಲ್ಕನಿಯಲ್ಲಿ ಕುಳಿತೆ.
FMನಲ್ಲಿ RJ ಮನಸ್ವಿ 'ನಗುವ ನಯನಾ , ಮಧುರಾ ಮೌನ.. ಮಿಡಿವ ಹೃದಯ ಇರೆ ಮಾತೇಕೆ ... ' ಹಾಡನ್ನು ಪ್ಲೇ ಮಾಡಿದ್ದಳು.
ಆ ಹಾಡು ಕೇಳ್ತಾ ಹೀಗೆ ಕಣ್ತುಂಬಾ ಪ್ರಶ್ನೆಗಳನ್ನಿಟ್ಟುಕೊಂಡು ಕುಳಿತುಕೊಂಡಿದ್ದಾಗ ಅಣ್ಣ ಕೊಟ್ಟ ಒಂದು ನಾವೆಲ್ ಕಿಟಕಿಯ ಬಳಿ ಧೂಳು ಹಿಡಿದು ಕೂತದ್ದನ್ನು ನೋಡಿದೆ.
ಅದೆಷ್ಟು ಸಮಯವಾಯಿತು ಒಂದು ಒಳ್ಳೆಯ ಪುಸ್ತಕ ಓದದೇ... ಪುಸ್ತಕ ತೆಗೆದು ಕಣ್ಣಾಡಿಸಿದರೆ
" ಪ್ರೀತಿಯೆಂದರೆ ಅಮೃತ" ಅಂತಿತ್ತು.
ಹಾಗಾದರೆ ಕೆಲವರು ಪ್ರೀತಿ ಕೈಕೊಟ್ಟಾಗ ಯಾಕೆ ವಿಷ ತೆಗೆದುಕೊಳ್ಳುತ್ತಾರೆ? "ಪ್ರೀತಿಯೆಂದರೆ ಗೆಲುವು"
"ಪ್ರೀತಿಯೆಂದರೆ ದೇವರು"
"ಪ್ರೀತಿಯೆಂದರೆ ಕನಸು"
"ಪ್ರೀತಿಯೆಂದರೆ ಭರವಸೆ "
ನಿಜಕ್ಕೂ ಈ ಪ್ರೀತಿ ಎಂದರೇನು? ಎಂಬ ಪ್ರಶ್ನೆ ಮಾತ್ರ ಭೂತವಾಗಿ ನನ್ನೆದುರು ನಿಂತಿದೆ, ಕಾಡುತಿದೆ..
ಪ್ರೀತಿ ಅಂದರೆ ಋಣವಾ?
ನಾನು ನೀನಿತ್ತ ಪ್ರೀತಿ- ಸಾಲವನ್ನು ವಾಪಸು ಮಾಡಿದ ನಂತರ ಏನೂ ಉಳಿಯವುದಿಲ್ವಾ...
ಹೇಗೆ ಯೋಚಿಸಿ ನೋಡಿದರೂ ಉತ್ತರ ಹೊಳೆಯುತ್ತಿಲ್ಲ..
ಎಷ್ಟು ಕನಸುಗಳು ಕಂಡದ್ದನ್ನು ಮರೆಸಿಕೊಂಡು ಹೊಸ ಅರ್ಥ ನೀಡುವ ಪ್ರೀತಿ ಒಮ್ಮೆ ಸುಲಭ ಒಮ್ಮೊಮ್ಮೆ ಕಠಿಣ....
ಅರ್ಥವೇ ಆಗದ ಅಸ್ಪಷ್ಟ ದೃಶ್ಯದಂತೆ...ಈ ದಾರಿಯಲ್ಲಿ ನನ್ನನ್ನು ನೀನು, ನಿನ್ನನ್ನು ನಾನು ಕೈ ಬಿಡದೆ ಕಾಯೋಣ ..
ನಮ್ಮ ಪುಟ್ಟ ಜಗತ್ತಲ್ಲಿ ನಮ್ಮದೇ ರೀತಿಯಲ್ಲಿ ಖುಷಿಯಿಂದ ಬಾಳುವ ನನ್ನಾಸೆಗೆ ನೀನೇ ಆಸರೆ.

Wednesday, January 14, 2015
ಅಕ್ಕ
"ನಮ್ಮ ಸಂಗೀತ ಇದೇ ಊರಿನಲ್ಲಿ ಟೀಚರ್ ಕೆಲಸ ಹುಡುಕಿಕೊಂಡು ಬಂದಿದ್ದಾಳಂತೆ ಕಣೇ ಶಾರದಾ..
ನಾನೇ ಇಂದು ರೇಷನ್ ಅಂಗಡಿ ಬಳಿ ಅವಳನ್ನು ನೋಡಿದೆ.. "
ಅಪ್ಪ ಅಮ್ಮನ ಬಳಿ ಹೇಳುತ್ತಿದ್ದರು.
ನನಗೆ ಆದ ಸಂತಸಕ್ಕೆ ಪಾರವೇ ಇಲ್ಲ. ನನ್ನ ಅಮ್ಮ ಏನೆಂದಳೋ ಗೊತ್ತಿಲ್ಲ..
ಆದರೆ ನಾನಂತೂ ಅವಳನ್ನು ಧಿಕ್ಕರಿಸಿಯಾದರೂ , ಸಂಗೀತ ಅಕ್ಕನನ್ನು ಕಾಣಲು ಹೋಗುತ್ತೇನೆ.
~~~~~~~~~~~~~~~~~~
ಸುಮಾರು ಎಂಟು ವರ್ಷದ ಹಿಂದೆ ಸಂಗೀತಾಳ ಮದುವೆಯಾಗಿತ್ತು.
ಬಡ ಹುಡುಗ ರಮೇಶ್ ನೋಡುವುದಕ್ಕೆ ಅತಿ ಸುಂದರನಾದರೂ, ಬಡವ ಹಾಗೂ ಅನಾಥನಾಗಿದ್ದ.
ಅವನ ಜೀವನದಲ್ಲಿ ಮದುವೆಯ ಕನಸುಗಳು ಸಾವಿರ ಸಲ ಬಂದಿದ್ದರೂ ಬಡತನದ ಸಲುವಾಗಿ ಆತ ಯಾವ ಹುಡುಗಿಗೂ ಹಿಡಿಸಲೇ ಇಲ್ಲ.
ಕೊನೆಗೆ ಅವನ ದೂರದ ಸಂಬಂಧಿಯಾದ ನಮ್ಮ ಮಾವನೇ ಅವರ ಮಗಳು ವನಜಳನ್ನು ಹೇಗೋ
ಒಪ್ಪಿಸಿ ಮದುವೆಯ ಸಿದ್ಧತೆ ನಡೆಸಿದರು. ಮದುವೆಯ ದಿನವೇ ಎಲ್ಲಾರಿಗೂ ಕೈಕೊಟ್ಟು ವನಜಾ ಬಾಳೆಮಂಡಿಯ ಕೆಲಸದ ಹುಡುಗನ ಜೊತೆ ಓಡಿಹೋಗಿದ್ದಳು.
ನನಗೆ ಆಗ ಹದಿನೆಂಟು ವರ್ಷ ಇನ್ನು ತುಂಬಿರಲಿಲ್ಲ.. ಆದ್ದರಿಂದ ,ಮಾವನ ಮರ್ಯಾದೆ ಉಳಿಸಲೆಂದು ನಮ್ಮಕ್ಕ ಸಂಗೀತಾಳನ್ನು ರಮೇಶನ ಜತೆ ಮದುವೆ ಮಾಡಿಬಿಟ್ಟರು.
ಅಕ್ಕ ಪಾಪದವಳು.
ತಾನಾಯಿತು, ತನ್ನ ಕೆಲಸವಾಯಿತು ಎಂದು ತೆಪ್ಪಗೆ ಇದ್ದುಬಿಡುವಳು. ನಾನೋ,ಬಹಳ ಚೂಟಿ, ಜೋರೆಂದು ಎಲ್ಲರೂ ಹೇಳುತ್ತಿದ್ದರು. ಅಕ್ಕನಿಗೆ ಓದು ಮುಂದುವರೆಸಲಾಗಲಿಲ್ಲ. ರಮೇಶ, ಬೆಂಗಳೂರಿನಲ್ಲಿ ಒಂದು ಸಣ್ಣ ಹೋಟೆಲ್ ನಲ್ಲಿ ಮಾನೇಜರ್ ಆಗಿದ್ದ.. ಕಡಿಮೆ ಸಂಬಳವಾದರೂ ಇಬ್ಬರಿರುವ ಮನೆಗೆ ಸಾಕೆನಿಸುತ್ತಿತ್ತು.
ಅಕ್ಕ ಮನೆಗೆಲಸ ಮಾಡಿ ,ಗಂಡನ ಬೇಕು-ಬೇಡಗಳನ್ನು ನೋಡಿಕೊಳ್ಳಬೇಕಿತ್ತು.
ಅತ್ತೆ,ಮಾವ ಇಲ್ಲದ ಮನೆ ಆಕೆಗೆ ಬೇಸರವೆನಿಸಿತ್ತು.
ಅದಕ್ಕೇ ತವರಿಗೆ ಆಗಾಗ ಬಂದು ನಮ್ಮನ್ನೆಲ್ಲ ಮಾತಾಡಿಸಿ ಹೋಗುತ್ತಿದ್ದಳು. ನಮ್ಮೂರಿಗೆ ಆಗ ಟ್ರೈನ್'ಗಳು ಅಷ್ಟಾಗಿ ಇರಲಿಲ್ಲ..
ಅದಕ್ಕಾಗಿಯೇ ಅಕ್ಕ ಸದಾ ನಮಗೆ ಪತ್ರ ಬರೆದು ವಿಷಯ ತಿಳಿಸುತ್ತಿದ್ದಳು..
ಆದರೆ ಅಕ್ಕ ಈ ಬಾರಿ ಬಂದು ಹೋದ ಮೇಲೆ ಮೂರು ತಿಂಗಳ ನಂತರವೂ ಪತ್ರ ಬರೆಯಲೇ ಇಲ್ಲ. ನನ್ನ ತಂದೆಯವರು ಪೌರೋಹಿತ್ಯ ಮಾಡುತ್ತ ಜೀವನ ಸಾಗಿಸುತ್ತಾರೆ..
ಅಮ್ಮ ಮನೆಯಲ್ಲೇ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾಳೆ.
ಹಾಗೇನೂ ಸ್ಥಿತಿವಂತರಲ್ಲ ಆದರೂ ಉಣಲು,ಉಡಲು ಏನೂ ಕೊರತೆ ಇರಲಿಲ್ಲ.
ನಾವು ಆಕಳು, ಕುರಿ ಇತರೇ ಸಾಕಿದ್ದರಿಂದ ಮನೆ ಸ್ವಲ್ಪ ಸಮೃದ್ಧತೆಯಿಂದ ಕೂಡಿತ್ತು.
ಅಕ್ಕ ಬಂದಾಗಲೆಲ್ಲ ತರುತ್ತಿದ್ದ ತಿನಿಸುಗಳಿಗಾಗಿ ಕಾಯುವುದೇ ನನ್ನ ಕಾಯಕವಾಗಿತ್ತು.
ನಾನಾಗ ಪಟ್ಟಣವನ್ನೇ ಒಮ್ಮೆಯೂ ನೋಡಿರಲಿಲ್ಲ..ನನಗೆ ಅಲ್ಲಿ ವಾತಾವರಣ, ಜನರು, ಉಡುಗೆ-ತೊಡುಗೆ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿದ್ದೇ ಅಕ್ಕನು ಬರೆದ ಪತ್ರಗಳಿಂದ.
ಆದರೆ ಮೂರು ತಿಂಗಳಾದರೂ ಅಕ್ಕ ಒಂದೂ ಪತ್ರ ಬರೆಯದೆ ಇದ್ದದ್ದು ನನಗೆ ಅತ್ಯಂತ ಬೇಸರ ಉಂಟುಮಾಡಿತು.
ಅಪ್ಪ ಕಾಳಜಿ ವಹಿಸುವುದಲ್ಲ ಅಂತಲ್ಲ.
ಅವರು ಗಮನ ಕೊಡುತ್ತಿರಲಿಲ್ಲ ..
ಅಂತೂ ಅವರನ್ನು ಒಪ್ಪಿಸಿ ಬೆಂಗಳೂರಿಗೆ ಹೋಗುವಂತೆ ಮಾಡಿದಳು ಅಮ್ಮ.
ಬೆಂಗಳೂರಿಗೆ ಹೋದಾಗ ಅಪ್ಪನಿಗೆ ತಿಳಿದದ್ದು ಏನೆಂದರೆ ಅಕ್ಕ ಗರ್ಭಿಣಿ ಎಂದು.
ಆಕೆಗೆ ರಮೇಶ ತುಂಬಾ ಮಾನಸಿಕ, ದೈಹಿಕ ಹಿಂಸೆ ಕೊಡುತ್ತಿದ್ದನಂತೆ.
ನಾಲ್ಕಾರು ದಿನ ಮನೆಗೇ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ಅಸಹ್ಯವಾಗಿ ನಡೆದುಕೊಂಡ ...
ಅಯ್ಯೋ, ಗರ್ಭಿಣಿ ಹೆಂಗಸು, ಒಬ್ಬಳೇ ಏನು ಮಾಡಿಯಾಳು..
ದೂರದ ಊರಿಗೆ ಬೇರೆ ಮತ್ತೆ-ಮತ್ತೆ ಹೋಗಿ ಬರಲಾಗದು.
ಅಪ್ಪ ತಡಮಾಡದೆ ಅಕ್ಕನನ್ನು ಕರೆದುಕೊಂಡು ಅದೇ ರಾತ್ರಿ ಬಸ್ಸಿನಲ್ಲಿ ಆಗದೆಂದು ಸಾವಿರದ ಎಂಟುನೂರು ರೂಪಾಯಿ ಬಾಡಿಗೆ ಕೊಟ್ಟು ಟ್ಯಾಕ್ಸಿ ಮಾಡಿಕೊಂಡು ಬಂದುಬಿಟ್ಟರು.
ಪಾಪಿ ಆ ನೀಚ ರಮೇಶ, ನನ್ನ ಅಕ್ಕನನ್ನು ಮೈತುಂಬ ಬಾಸುಂಡೆ ಬರುವಂತೆ ಹೊಡೆದಿದ್ದ. ಆಗ ಎಲ್ಲರಿಗಿಂತ ನನಗೆ ಕೋಪವು ನೆತ್ತಿಗೇರಿತ್ತು. ಮುಗ್ಧ ಹುಡುಗಿಯನ್ನು ಪ್ರೀತಿ, ಕಳಕಳಿಯಿಂದ ನೋಡಿಕೊಳ್ಳದೆ ಅವಳನ್ನು ಹಿಂಸೆಗೆ ಗುರಿಮಾಡುವ ಗಂಡುಗಳು ಹುಟ್ಟುತ್ತಲೇ ಸತ್ತುಹೋಗಬಾರದೇ ಎನಿಸಿತು. ಗಂಡುಮಕ್ಕಳ ಮೇಲೇ ನನಗರಿವಿಲ್ಲದೇ ಅಸಹ್ಯ ಭಾವನೆ ಬಂದುಬಿಟ್ಟಿತ್ತು. ಅಕ್ಕ, ನಮ್ಮ ಮನೆಯಲ್ಲೇ ಇದ್ದರೂ ನೆಮ್ಮದಿ ಕಾಣಲಿಲ್ಲ . ಆ ಪಾಪಿ, ಇಲ್ಲಿಗೇ ಬಂದ. ಕಿರುಚಾಟ ನಡೆಸಿ ನಮ್ಮ ತಂದೆಯ ಮಾನವನ್ನು ಹರಾಜು ಹಾಕಿದ. ಅಕ್ಕನ ಶೀಲದ ಬಗ್ಗೆ ಕೆಟ್ಟ ಮಾತಾಡಿದ್ದಲ್ಲದೆ ನನ್ನ ಕಡೆಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ.. ಊರಿನ ಜನ ಸೇರಿ ತೀರ್ಮಾನ ಮಾಡಿ ಅಕ್ಕ ಬಾಣಂತನಕ್ಕೆ ಇಲ್ಲಿ ಬರುವುದಾಗಿಯೂ, ಸಧ್ಯಕ್ಕೆ ಅವಳು ಗಂಡನ ಜೊತೆ ಅವಳ ಮನೆಗೆ ಹೋಗಬೇಕಾಗಿಯೂ ಹೇಳಿಬಿಟ್ಟರು. ನಮಗಂತೂ ಆದ ಸಂಕಟ ಅಷ್ಟಿಷ್ಟಲ್ಲ.. ಪಾಪದ ಅಕ್ಕ ಹೆದರುತ್ತಲೇ ಅವನ ಜೊತೆ ಹೊರಟಳು. ಅಂದು ಊರವರ ನ್ಯಾಯ ಕೇಳದಿದ್ದರೆ ನಮ್ಮ ಅಕ್ಕನ ಮಗು ಉಳಿಯುತ್ತಿತ್ತು.. ಅಲ್ಲಿ ಹೋದ ಮೇಲೆ ಆದದ್ದೇ ಇದು.. ಆ ಪಾಪಿ, ಅಕ್ಕನು ಗಂಡು ಹೆರುತ್ತಾಳೆಂದು ಸಂಭ್ರಮದಿಂದ ಅವಳ ಉಪಚಾರ ಮಾಡಿ, ಹೂವಂತೆ ನೋಡಿಕೊಂಡ. ಆದರೆ , ಲಂಚ ಕೊಟ್ಟು ವೈದ್ಯರನ್ನು ಕೇಳಿದಾಗ ಗೊತ್ತಾದ ವಿಷಯ ಅದು ಹೆಣ್ಣು ಭ್ರೂಣ ... ಅಂದೇ ಅವಳನ್ನು ಆಸ್ಪತ್ರೆಗೆ ,ಚಿಕಿತ್ಸೆಗೆಂದು ಸುಳ್ಳು ಹೇಳಿ ಕರೆದುಕೊಂಡು ಹೋದ. ಡಾಕ್ಟರ್ ಇವನಿಂದ ಹಣ ಪಡೆದುಕೊಂಡು, ಅವಳ ಜ್ಞಾನ ತಪ್ಪಿಸಿದರು.
ಆಗಲೇ ಆರು ತಿಂಗಳಾದ್ದರಿಂದ ಮಗುವನ್ನು ಕೊಲ್ಲಲಾಗದೇ ಆಪರೇಶನ್ ಮಾಡಿ ಹೊರತೆಗೆದರು. ಆಗ ರಮೇಶನು, ಯಾರಿಗೂ ತಿಳಿಯದಂತೆ ಮಗುವಿನ ಪ್ರಾಣ ತೆಗೆದುಬಿಟ್ಟನು ... ಆ ಏನೂ ಅರಿಯದ ಕಂದ, ಕಣ್ಣುಬಿಡುತ್ತಲೇ ಸಾಯುವಂತಾಯಿತು.
ಜಗದಲ್ಲಿ ಎಷ್ಟೋ ಜನರು ಮಗುವಿನ ಅಳು ಕೇಳಲು,ತಮ್ಮ ಮಡಿಲಲ್ಲಿ ಮಲಗಿಸಿ ಆಡಿಸಲು ಕಾತರದಿಂದ ಕಾಯುತ್ತಾರೆ..
ಆದರೆ ಇಲ್ಲಿ ಆ ಪುಟ್ಟ ಜೀವಕ್ಕೇ ಬೆಲೆ ಇಲ್ಲದಾಗಿತ್ತು. ಅಕ್ಕನಿಗೆ ಎಚ್ಚರವಾದಾಗ ಅವಳ ಹೊಟ್ಟೆ ಬರಿದಾಗಿತ್ತು. ಅವಳ ಹೃದಯ ಮಾತ್ರ ದು:ಖದಿಂದ ಭಾರವಾಗಿತ್ತು.
ಬಹುಶಃ ಅವಳಿಗೆ ಗೊತ್ತಿತ್ತೇನೋ..
. ತನ್ನ ಮುದ್ದು ಕಂದಮ್ಮ ಚಿರನಿದ್ರೆಗೆ ಜಾರಿದೆ ಎಂದು. ಅವಳು ಅಳಲಿಲ್ಲ. ಕಿರುಚಲಿಲ್ಲ. ನಕ್ಕಳು.. ಅಷ್ಟೇ ಅವಳು ಮಗುವನ್ನು ಕಳೆದುಕೊಂಡು ಹುಚ್ಚಿ ಆದಳೆಂದು ಪಾಪಿ ರಮೇಶ ಎಲ್ಲರ ಬಾಯಿ ಮುಚ್ಚಿಸಿದ..
~~~~~~~~~~~~~~~~~
ಅಂದು ಆಸ್ಪತ್ರೆಯಿಂದ ಓಡಿಹೋದ ಸಂಗೀತಕ್ಕ ಈಗ ನಮ್ಮೂರಿನ ಹೈಸ್ಕೂಲ್ಗೆ ಮಾಥ್ಸ್ ಟೀಚರಾಗಿ ಬಂದಾಗ ಅಮ್ಮ ನಂಬಲೇ ಇಲ್ಲ.
ಅಪ್ಪನ ಮನಸ್ಸು ಅವಳೇ ನಮ್ಮ ಸಂಗೀತಾ ಎನ್ನುತಿತ್ತು.
ಈಕೆ ಯಾರೋ ಬೇರೆ ಅಂತೆ ಎಂದು ಸುಳ್ಳು ಹೇಳಿ, ನಾನು ಹುಣಸೂರಿಗೆ ಹೋಗಿದ್ದ ಸಮಯದಲ್ಲಿ ಅಕ್ಕನನ್ನು ಭೇಟಿ ಮಾಡಲು ಹೋದಳಂತೆ ಅಮ್ಮ.
ಎಷ್ಟಾದರೂ ಒಬ್ಬ ತಾಯಿಯ ಸಂಕಟ ಕೇಳಲು ಇನ್ನೊಂದು ತಾಯಿಯೇ ಹೋಗಬೇಕಲ್ಲವೇ? ನನ್ನಕ್ಕ ಈಗ ಸುಖವಾಗಿದ್ದಾಳೆ... ಅದಕ್ಕಿಂತ ಮಿಗಿಲಾಗಿ ಆಕೆ ಎಲ್ಲ ಮರೆತು, ಹೊಸ ವ್ಯಕ್ತಿತ್ವ ಪಡೆದಿದ್ದಾಳೆ...
ಕಾಲೇಜು ಓದಿ ,ಉನ್ನತ ಪದವಿಯನ್ನು ಯಾರೋ ಧರ್ಮಾತ್ಮರ ಸಹಾಯದಿಂದ ಪಡೆದ ಅಕ್ಕ ಊರಿನ ಬಡ ಮಕ್ಕಳ ವಿದ್ಯೆಗೆ ಸಹಾಯ ಮಾಡುತ್ತಾ
, ತನ್ನ ಜೀವನದ ಗುರಿಯನ್ನು ಕಂಡುಕೊಂಡಿದ್ದಾಳೆ..
ನನ್ನ ಪ್ರೀತಿಯ ಅಕ್ಕ..

Subscribe to:
Posts (Atom)